ಕಿಚನ್ ಕಿಂಗ್ ಮಸಾಲಾ ರೆಸಿಪಿ | Kitchen King Masala in kannada

Browse more:

Ingredients

  • 3 ಟೇಬಲ್ಸ್ಪೂನ್ ಕೊತ್ತಂಬರಿ ಬೀಜಗಳು
  • 1½ ಟೇಬಲ್ಸ್ಪೂನ್ ಜೀರಿಗೆ
  • 1 ಟೀಸ್ಪೂನ್ ಶಾಹಿ ಜೀರಾ
  • 2 ಟೀಸ್ಪೂನ್ ಫೆನ್ನೆಲ್ / ಸೋಂಪು
  • 1 ಟೀಸ್ಪೂನ್ ಕಡಲೆ ಬೇಳೆ
  • 1 ಟೀಸ್ಪೂನ್ ಉದ್ದಿನ ಬೇಳೆ
  • 2 ಟೇಬಲ್ಸ್ಪೂನ್ ಹಳದಿ ಸಾಸಿವೆ
  • ¼ ಟೀಸ್ಪೂನ್ ಮೆಂತ್ಯ
  • 1 ಇಂಚು ದಾಲ್ಚಿನ್ನಿ
  • 2 ಬೇ ಎಲೆ
  • 1 ಇಂಚು ಒಣ ಶುಂಠಿ
  • 2 ಪಾಡ್ ಕಪ್ಪು ಏಲಕ್ಕಿ
  • 1 ಟೀಸ್ಪೂನ್ ಏಲಕ್ಕಿ
  • 1 ಜಾವಿತ್ರಿ
  • 1 ಸ್ಟಾರ್ ಅನೀಸ್
  • 1 ಟೀಸ್ಪೂನ್ ಲವಂಗ
  • ½ ಜಾಯಿಕಾಯಿ
  • 2 ಟೇಬಲ್ಸ್ಪೂನ್ ಗಸಗಸೆ ಬೀಜಗಳು
  • 2 ಟೇಬಲ್ಸ್ಪೂನ್ ಕಸೂರಿ ಮೇಥಿ
  • ½ ಟೇಬಲ್ಸ್ಪೂನ್ ಕಾಳು ಮೆಣಸು
  • 8 ಒಣಗಿದ ಕೆಂಪು ಮೆಣಸಿನಕಾಯಿ
  • 1 ಟೀಸ್ಪೂನ್ ಕಪ್ಪು ಉಪ್ಪು
  • 1 ಟೀಸ್ಪೂನ್ ಅರಿಶಿನ
  • 1 ಟೇಬಲ್ಸ್ಪೂನ್ ಆಮ್ಚೂರ್
  • 1 ಟೀಸ್ಪೂನ್ ಉಪ್ಪು

Steps

  1. ಮೊದಲನೆಯದಾಗಿ, ದಪ್ಪ ತಳವಿರುವ ಪ್ಯಾನ್‌ನಲ್ಲಿ 3 ಟೇಬಲ್ಸ್ಪೂನ್ ಕೊತ್ತಂಬರಿ ಬೀಜಗಳು, 1½ ಟೇಬಲ್ಸ್ಪೂನ್ ಜೀರಿಗೆ, 1 ಟೀಸ್ಪೂನ್ ಶಾಹಿ ಜೀರಾ, 2 ಟೀಸ್ಪೂನ್ ಫೆನ್ನೆಲ್, 1 ಟೀಸ್ಪೂನ್ ಕಡಲೆ ಬೇಳೆ, ಮತ್ತು 1 ಟೀಸ್ಪೂನ್ ಉದ್ದಿನ ಬೇಳೆ, 2 ಟೇಬಲ್ಸ್ಪೂನ್ ಹಳದಿ ಸಾಸಿವೆ ಮತ್ತು ¼ ಟೀಸ್ಪೂನ್ ಮೆಂತ್ಯ ತೆಗೆದುಕೊಳ್ಳಿ.
  2. ಮಸಾಲೆಗಳು ಸುವಾಸನೆಯುಕ್ತವಾಗುವವರೆಗೆ ಕಡಿಮೆ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿ.
  3. ಈಗ 1 ಇಂಚು ದಾಲ್ಚಿನ್ನಿ, 2 ಬೇ ಎಲೆ ಮತ್ತು 1 ಇಂಚು ಒಣ ಶುಂಠಿಯನ್ನು ಸೇರಿಸಿ.
  4. 2 ಪಾಡ್ ಕಪ್ಪು ಏಲಕ್ಕಿ, 1 ಟೀಸ್ಪೂನ್ ಏಲಕ್ಕಿ, 1 ಜಾವಿತ್ರಿ, 1 ಸ್ಟಾರ್ ಅನೀಸ್, 1 ಟೀಸ್ಪೂನ್ ಲವಂಗ ಮತ್ತು ½ ಜಾಯಿಕಾಯಿ ಸೇರಿಸಿ.
  5. ನಂತರ, 2 ಟೇಬಲ್ಸ್ಪೂನ್ ಗಸಗಸೆ ಬೀಜಗಳು, 2 ಟೇಬಲ್ಸ್ಪೂನ್ ಕಸೂರಿ ಮೇಥಿ, ½ ಟೇಬಲ್ಸ್ಪೂನ್ ಕಾಳು ಮೆಣಸು, ಮತ್ತು 8 ಒಣಗಿದ ಕೆಂಪು ಮೆಣಸಿನಕಾಯಿಯನ್ನು ಸೇರಿಸಿ.
  6. ಮಸಾಲೆಗಳು ಕುರುಕಲು ಮತ್ತು ಸುವಾಸನೆಯುಕ್ತವಾಗುಗುವವರೆಗೆ ಕಡಿಮೆ ಉರಿಯಲ್ಲಿ ಡ್ರೈ ರೋಸ್ಟ್ ಮಾಡಿ.
  7. ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ.
  8. 1 ಟೀಸ್ಪೂನ್ ಕಪ್ಪು ಉಪ್ಪು, 1 ಟೀಸ್ಪೂನ್ ಅರಿಶಿನ, 1 ಟೇಬಲ್ಸ್ಪೂನ್ ಆಮ್ಚೂರ್, ಮತ್ತು 1 ಟೀಸ್ಪೂನ್ ಉಪ್ಪನ್ನು ಸೇರಿಸಿ.
  9. ಪಲ್ಸ್ ಮಾಡಿ ಮತ್ತು ನುಣ್ಣಗೆ ಪುಡಿಮಾಡಿ.
  10. ಅಂತಿಮವಾಗಿ, ಕಿಚನ್ ಕಿಂಗ್ ಮಸಾಲಾ ಸಬ್ಜಿ ಅಥವಾ ಪುಲಾವ್ ತಯಾರಿಕೆಯಲ್ಲಿ ಬಳಸಲು ಸಿದ್ಧವಾಗಿದೆ.