ಸೆಜ್ವಾನ್ ಪನೀರ್ ರೆಸಿಪಿ | schezwan paneer in kannada | ಪನೀರ್ ಸೆಜ್ವಾನ್

Browse more:

Ingredients

  • ½ ಕಪ್ ಮೈದಾ
  • ¼ ಕಪ್ ಕಾರ್ನ್ ಫ್ಲೋರ್
  • ¼ ಟೀಸ್ಪೂನ್ ಕಾಳು ಮೆಣಸು / ಪೆಪ್ಪರ್
  • ½ ಟೀಸ್ಪೂನ್ ಸೆಜ್ವಾನ್ ಸಾಸ್
  • ¼ ಟೀಸ್ಪೂನ್ ಉಪ್ಪು
  • ½ ಕಪ್ ನೀರು
  • 11 ತುಂಡು ಪನೀರ್ / ಕಾಟೇಜ್ ಚೀಸ್
  • ಎಣ್ಣೆ, ಹುರಿಯಲು
  • 3 ಟೀಸ್ಪೂನ್ ಎಣ್ಣೆ
  • 2 ಬೆಳ್ಳುಳ್ಳಿ, ಸಣ್ಣಗೆ ಕತ್ತರಿಸಿದ
  • 1 ಇಂಚಿನ ಶುಂಠಿ, ಸಣ್ಣಗೆ ಕತ್ತರಿಸಿದ
  • 1 ಚಿಲ್ಲಿ, ಸೀಳಿದ
  • 4 ಟೇಬಲ್ಸ್ಪೂನ್ ಸ್ಪ್ರಿಂಗ್ ಈರುಳ್ಳಿ, ಸಣ್ಣಗೆ ಕತ್ತರಿಸಿದ
  • ¼ ಈರುಳ್ಳಿ, ಸಣ್ಣಗೆ ಕತ್ತರಿಸಿದ
  • ¼ ಕ್ಯಾಪ್ಸಿಕಂ, ಹೋಳು
  • 2 ಟೇಬಲ್ಸ್ಪೂನ್ ಸೆಜ್ವಾನ್ ಸಾಸ್
  • 1 ಟೇಬಲ್ಸ್ಪೂನ್ ವಿನೆಗರ್
  • 1 ಟೇಬಲ್ಸ್ಪೂನ್ ಸೋಯಾ ಸಾಸ್
  • ¼ ಟೀಸ್ಪೂನ್ ಸಕ್ಕರೆ
  • ¼ ಟೀಸ್ಪೂನ್ ಉಪ್ಪು

Steps

  1. ಮೊದಲನೆಯದಾಗಿ, ½ ಕಪ್ ಮೈದಾ ಮತ್ತು ¼ ಕಪ್ ಕಾರ್ನ್ ಫ್ಲೋರ್ ತೆಗೆದುಕೊಂಡು ಬ್ಯಾಟರ್ ತಯಾರಿಸಿ.
  2. ¼ ಟೀಸ್ಪೂನ್ ಪೆಪ್ಪರ್, ½ ಟೀಸ್ಪೂನ್ ಸೆಜ್ವಾನ್ ಸಾಸ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  3. ½ ಕಪ್ ನೀರನ್ನು ಸೇರಿಸಿ ಉಂಡೆ ಮುಕ್ತ ನಯವಾದ ಬ್ಯಾಟರ್ ತಯಾರಿಸಿ.
  4. 11 ಪನೀರ್ ತುಂಡುಗಳನ್ನು ಸೇರಿಸಿ ಮತ್ತು ಸಂಪೂರ್ಣವಾಗಿ ಅದ್ದಿ.
  5. ಬಿಸಿ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ಆರೋಗ್ಯಕರ ಆಯ್ಕೆಗಾಗಿ ನೀವು ಶೇಲ್ಲೋ ಫ್ರೈ ಸಹ ಮಾಡಬಹುದು.
  6. ಅವುಗಳು ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ.
  7. ಅಂತಿಮವಾಗಿ, ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಲು ಅಡಿಗೆ ಟವೆಲ್ ಮೇಲೆ ಹುರಿದ ಪನೀರ್ ಅನ್ನು ತೆಗೆಯಿರಿ. ನಂತರ ಪಕ್ಕಕ್ಕೆ ಇರಿಸಿ.
  8. ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 2 ಬೆಳ್ಳುಳ್ಳಿ, 1 ಇಂಚು ಶುಂಠಿ ಮತ್ತು 1 ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಜ್ವಾಲೆ ಹೆಚ್ಚಾಗಿಯೇ ಇರಲಿ.
  9. ಹೆಚ್ಚಿನ ಜ್ವಾಲೆಯ ಮೇಲೆ ¼ ಈರುಳ್ಳಿ ಮತ್ತು 2 ಟೀಸ್ಪೂನ್ ಸ್ಪ್ರಿಂಗ್ ಈರುಳ್ಳಿ ಹಾಕಿ.
  10. ಈಗ ¼ ಕ್ಯಾಪ್ಸಿಕಂ ಸೇರಿಸಿ, ಅವುಗಳು ಸ್ವಲ್ಪ ಬಣ್ಣವನ್ನು ಬದಲಾಯಿಸುವವರೆಗೆ ಸಾಟ್ ಮಾಡುವುದನ್ನು ಮುಂದುವರಿಸಿ.
  11. ಹೆಚ್ಚುವರಿಯಾಗಿ 2 ಟೀಸ್ಪೂನ್ ಸೆಜ್ವಾನ್ ಸಾಸ್, 1 ಟೀಸ್ಪೂನ್ ವಿನೆಗರ್, 1 ಟೀಸ್ಪೂನ್ ಸೋಯಾ ಸಾಸ್, ¼ ಟೀಸ್ಪೂನ್ ಸಕ್ಕರೆ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
  12. ಚೆನ್ನಾಗಿ ಮಿಶ್ರಣ ಮಾಡಿ ಒಂದು ನಿಮಿಷ ಬೇಯಿಸಿ.
  13. ಕಾರ್ನ್‌ ಫ್ಲೋರ್ ಸ್ಲರ್ರಿ ಸೇರಿಸಿ. ಕಾರ್ನ ಫ್ಲೋರ್ ಸ್ಲರಿ ತಯಾರಿಸಲು 2 ಟೀಸ್ಪೂನ್ ಕಾರ್ನ್ ಫ್ಲೋರ್ ಅನ್ನು ¼ ಕಪ್ ನೀರಿನೊಂದಿಗೆ ಬೆರೆಸಿ.
  14. ಗ್ರೇವಿ ಸ್ವಲ್ಪ ದಪ್ಪವಾಗುವವರೆಗೆ ಮತ್ತು ಹೊಳಪು ಬರುವವರೆಗೆ ಉತ್ತಮ ಮಿಶ್ರಣವನ್ನು ನೀಡಿ.
  15. ಇದಕ್ಕೆ, ಹುರಿದ ಪನೀರ್ ಸೇರಿಸಿ.
  16. ಸಾಸ್ ಚೆನ್ನಾಗಿ ಎಲ್ಲ ಪನೀರ್ ಗಳಿಗೂ ಲೇಪಿತವಾಗಿದೆಯಾ ಎಂದು ಖಚಿತಪಡಿಸಿಕೊಂಡು ನಿಧಾನವಾಗಿ ಮಿಶ್ರಣ ಮಾಡಿ.
  17. ಅಂತಿಮವಾಗಿ, ಸೆಜ್ವಾನ್ ಪನೀರ್ ಅನ್ನು ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ ಮತ್ತು ಕತ್ತರಿಸಿದ ಸ್ಪ್ರಿಂಗ್ ಈರುಳ್ಳಿಯನ್ನು ಅಲಂಕರಿಸಿ. ಫ್ರೈಡ್ ರೈಸ್ ನೊಂದಿಗೆ ಬಡಿಸಿ.