Skip to content
ಪಂಚಮೇಲ್ ದಾಲ್ ರೆಸಿಪಿ | panchmel dal in kannada | ಪಂಚರತ್ನ ದಾಲ್
Ingredients
- ¼ ಕಪ್ ತೊಗರಿ ಬೇಳೆ
- ¼ ಕಪ್ ಉದ್ದಿನ ಬೇಳೆ
- ¼ ಕಪ್ ಹೆಸರು ಬೇಳೆ
- ¼ ಕಪ್ ಮಸೂರ್ ದಾಲ್
- ¼ ಕಪ್ ಕಡ್ಲೆ ಬೇಳೆ
- ½ ಟೀಸ್ಪೂನ್ ಅರಿಶಿನ
- ½ ಟೀಸ್ಪೂನ್ ಉಪ್ಪು
- 2 ಬೇ ಎಲೆ
- 1 ಟೀಸ್ಪೂನ್ ತುಪ್ಪ
- 3 ಕಪ್ ನೀರು
- 2 ಟೇಬಲ್ಸ್ಪೂನ್ ತುಪ್ಪ
- 1 ಬೇ ಎಲೆ
- 4 ಲವಂಗ
- 1 ಕಪ್ಪು ಏಲಕ್ಕಿ
- 1 ಟೀಸ್ಪೂನ್ ಜೀರಿಗೆ
- 1 ಒಣಗಿದ ಕೆಂಪು ಮೆಣಸಿನಕಾಯಿ
- 1 ಈರುಳ್ಳಿ (ಸಣ್ಣಗೆ ಕತ್ತರಿಸಿದ)
- 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್
- ¼ ಟೀಸ್ಪೂನ್ ಅರಿಶಿನ
- 1 ಟೀಸ್ಪೂನ್ ಚಿಲ್ಲಿ ಪೌಡರ್
- 1 ಟೀಸ್ಪೂನ್ ಕೊತ್ತಂಬರಿ ಪುಡಿ
- ½ ಟೀಸ್ಪೂನ್ ಜೀರಾ ಪೌಡರ್
- ½ ಟೀಸ್ಪೂನ್ ಉಪ್ಪು
- 2 ಟೊಮೆಟೊ (ಸಣ್ಣಗೆ ಕತ್ತರಿಸಿದ)
- ¼ ಟೀಸ್ಪೂನ್ ಗರಂ ಮಸಾಲಾ
- 1 ಟೀಸ್ಪೂನ್ ಕಸೂರಿ ಮೇಥಿ (ಪುಡಿಮಾಡಿದ)
- 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು (ಸಣ್ಣಗೆ ಕತ್ತರಿಸಿದ)
- 1 ಟೀಸ್ಪೂನ್ ತುಪ್ಪ
- 1 ಟೀಸ್ಪೂನ್ ಜೀರಿಗೆ
- ¼ ಟೀಸ್ಪೂನ್ ಚಿಲ್ಲಿ ಪೌಡರ್
- 1 ಒಣಗಿದ ಕೆಂಪು ಮೆಣಸಿನಕಾಯಿ
Steps
- ಮೊದಲಿಗೆ, ಒಂದು ಬಟ್ಟಲಿನಲ್ಲಿ ½ ಕಪ್ ತೊಗರಿ ಬೇಳೆ, ¼ ಕಪ್ ಉದ್ದಿನ ಬೇಳೆ, ¼ ಕಪ್ ಹೆಸರು ಬೇಳೆ, ¼ ಕಪ್ ಮಸೂರ್ ದಾಲ್ ಮತ್ತು ¼ ಕಪ್ ಕಡ್ಲೆ ಬೇಳೆಯನ್ನು ತೆಗೆದುಕೊಳ್ಳಿ.
- ಚೆನ್ನಾಗಿ ತೊಳೆದು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ.
- ಪ್ರೆಷರ್ ಕುಕ್ಕರ್ಗೆ ನೆನೆಸಿದ ದಾಲ್ ಅನ್ನು ವರ್ಗಾಯಿಸಿ.
- ½ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಉಪ್ಪು, 2 ಬೇ ಎಲೆ, 1 ಟೀಸ್ಪೂನ್ ತುಪ್ಪ ಮತ್ತು 3 ಕಪ್ ನೀರು ಸೇರಿಸಿ.
- 5 ಸೀಟಿಗಳಿಗೆ ಅಥವಾ ಬೇಳೆ ಸಂಪೂರ್ಣವಾಗಿ ಬೇಯುವವರೆಗೆ ಪ್ರೆಷರ್ ಕುಕ್ ಮಾಡಿ.
- ಕುಕ್ಕರ್ ತೆರೆಯಿರಿ ಮತ್ತು ದಾಲ್ ಚೆನ್ನಾಗಿ ಬೆಂದಿದೆಯಾ ಎಂದು ಪರಿಶೀಲಿಸಿ. ಪಕ್ಕಕ್ಕೆ ಇರಿಸಿ.
- ದೊಡ್ಡ ಕಡೈ ನಲ್ಲಿ 2 ಟೇಬಲ್ಸ್ಪೂನ್ ತುಪ್ಪ ಬಿಸಿ ಮಾಡಿ. 1 ಬೇ ಎಲೆ, 4 ಲವಂಗ, 1 ಕಪ್ಪು ಏಲಕ್ಕಿ, 1 ಟೀಸ್ಪೂನ್ ಜೀರಾ ಮತ್ತು 1 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
- ಮಸಾಲೆಗಳು ಪರಿಮಳ ಬರುವವರೆಗೂ ಕಡಿಮೆ ಜ್ವಾಲೆಯ ಮೇಲೆ ಸಾಟ್ ಮಾಡಿ.
- ಈಗ 1 ಈರುಳ್ಳಿ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ ಮತ್ತು ಈರುಳ್ಳಿ ಗೋಲ್ಡನ್ ಬ್ರೌನ್ ಆಗುವ ತನಕ ಸಾಟ್ ಮಾಡಿ.
- ಈಗ ½ ಟೀಸ್ಪೂನ್ ಅರಿಶಿನ, 1 ಟೀಸ್ಪೂನ್ ಚಿಲ್ಲಿ ಪೌಡರ್, 1 ಟೀಸ್ಪೂನ್ ಕೊತ್ತಂಬರಿ ಪುಡಿ, ½ ಟೀಸ್ಪೂನ್ ಜೀರಾ ಪುಡಿ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
- ಮಸಾಲೆಗಳು ಪರಿಮಳ ಬರುವ ತನಕ ಸಾಟ್ ಮಾಡಿ.
- 2 ಟೊಮೆಟೊ ಸೇರಿಸಿ ಮತ್ತು ಟೊಮೆಟೊಗಳು ಮೃದು ಮತ್ತು ಮೆತ್ತಗಾಗುವವವರೆಗೂ ಸಾಟ್ ಮಾಡಿ.
- ಈಗ ಬೇಯಿಸಿದ ದಾಲ್ ಅನ್ನು ಸೇರಿಸಿ ಮತ್ತು ಅಗತ್ಯವಿರುವಂತೆ ಸ್ಥಿರತೆಯನ್ನು ಸರಿಹೊಂದಿಸಿ.
- ಮುಚ್ಚಿ 10 ನಿಮಿಷಗಳ ಕಾಲ ಅಥವಾ ಸುವಾಸನೆಯನ್ನು ಹೀರಿಕೊಳ್ಳುವವರೆಗೆ ಸಿಮ್ಮರ್ ನಲ್ಲಿಡಿ.
- ಈಗ ¼ ಟೀಸ್ಪೂನ್ ಗರಮ್ ಮಸಾಲಾ, 1 ಟೀಸ್ಪೂನ್ ಕಸೂರಿ ಮೇಥಿ ಮತ್ತು 2 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಬೆರೆಸಿ.
- ಒಗ್ಗರಣೆಯನ್ನು ತಯಾರಿಸಲು, 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ. 1 ಟೀಸ್ಪೂನ್ ಜೀರಾ, ¼ ಟೀಸ್ಪೂನ್ ಚಿಲ್ಲಿ ಪೌಡರ್ ಮತ್ತು 1 ಒಣಗಿದ ಕೆಂಪು ಮೆಣಸಿನಕಾಯಿ ಸೇರಿಸಿ.
- ತಕ್ಷಣ ದಾಲ್ ಮೇಲೆ ಒಗ್ಗರಣೆಯನ್ನು ಸುರಿಯಿರಿ. ಒಗ್ಗರಣೆ ಸುಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ.
- ಅಂತಿಮವಾಗಿ, ರೊಟ್ಟಿ ಅಥವಾ ಜೀರಾ ರೈಸ್ನೊಂದಿಗೆ ಪಂಚಮೇಲ್ ದಾಲ್ ಅಥವಾ ಪಂಚರತ್ನ ದಾಲ್ ಅನ್ನು ಆನಂದಿಸಿ.