Skip to content
ಮನೆಯಲ್ಲಿ ಬ್ರೆಡ್ ಕ್ರಂಬ್ಸ್ ರೆಸಿಪಿ | homemade bread crumbs in kannada
Ingredients
- 4 ಸ್ಲೈಸ್ ಬ್ರೆಡ್ (ಬಿಳಿ ಅಥವಾ ಕಂದು)
- 6 ರಸ್ಕ್
- 1 ಕಪ್ ಕಾರ್ನ್ ಫ್ಲೇಕ್ಸ್
- 1 ಮ್ಯಾಗಿ ನೂಡಲ್ಸ್
Steps
- ಮೊದಲಿಗೆ, ಫುಡ್ ಪ್ರೊಸೆಸ್ಸರ್ ನಲ್ಲಿ 4 ಬ್ರೆಡ್ನ ಸ್ಲೈಸ್ ಗಳನ್ನೂ ತೆಗೆದುಕೊಳ್ಳಿ. ನೀವು ಉಳಿದ ಬಿಳಿ ಅಥವಾ ಕಂದು ಬ್ರೆಡ್ ಅನ್ನು ಬಳಸಬಹುದು.
- ಫುಡ್ ಪ್ರೊಸೆಸರ್ನಲ್ಲಿ ರುಬ್ಬಲು ಸಹಾಯ ಮಾಡುವಂತೆ ತುಣುಕುಗಳಾಗಿ ಕತ್ತರಿಸಿ.
- ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
- ಪ್ಯಾನ್ ಗೆ ಕ್ರಂಬ್ಸ್ ಅನ್ನು ವರ್ಗಾಯಿಸಿ, ಕಡಿಮೆ ಜ್ವಾಲೆಯ ಮೇಲೆ ರೋಸ್ಟ್ ಮಾಡಿ
- ಬ್ರೆಡ್ ಕ್ರಂಬ್ಸ್ ಗಳನ್ನು ಗರಿಗರಿಯಾಗುವ ತನಕ ರೋಸ್ಟ್ ಮಾಡಿ. ಇದು ಬ್ರೆಡ್ ಕ್ರಂಬ್ಸ್ ಅನ್ನು ತುಂಬಾ ದಿನ ಉಳಿಯಲು ಸಹಾಯ ಮಾಡುತ್ತದೆ.
- ಸಂಪೂರ್ಣವಾಗಿ ತಣ್ಣಗಾಗಿಸಿ, ಮತ್ತು ಅಂತಿಮವಾಗಿ, ಬ್ರೆಡ್ನಿಂದ ತಯಾರಿಸಲಾದ ಬ್ರೆಡ್ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಇದನ್ನು ಒಂದು ವಾರದವರೆಗೆ ಸಂಗ್ರಹಿಸಬಹುದು.
- ಮೊದಲಿಗೆ, ಫುಡ್ ಪ್ರೊಸೆಸ್ಸರ್ ನಲ್ಲಿ 6 ರಸ್ಕ್ ಗಳನ್ನು ತುಂಡರಿಸಿ ತೆಗೆದುಕೊಳ್ಳಿ.
- ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
- ಅಂತಿಮವಾಗಿ, ರಸ್ಕ್ನಿಂದ ತಯಾರಿಸಲಾದ ರಸ್ಕ್ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಬಹುದು.
- ಮೊದಲಿಗೆ, ಫುಡ್ ಪ್ರೋಸೆಸ್ಸರ್ ನಲ್ಲಿ 1 ಕಪ್ ಕಾರ್ನ್ ಫ್ಲೇಕ್ಸ್ ತೆಗೆದುಕೊಳ್ಳಿ.
- ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
- ಅಂತಿಮವಾಗಿ, ಕಾರ್ನ್ ಫ್ಲೇಕ್ಸ್ ಗಳಿಂದ ತಯಾರಿಸಲಾದ ಕಾರ್ನ್ ಫ್ಲೇಕ್ಸ್ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ನೀವು ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಬಹುದು.
- ಮೊದಲಿಗೆ, ಫುಡ್ ಪ್ರೊಸೆಸ್ಸರ್ ನಲ್ಲಿ 1 ಪ್ಯಾಕ್ ಮ್ಯಾಗಿ ತೆಗೆದುಕೊಳ್ಳಿ.
- ಅದನ್ನು ಒರಟಾದ ವಿನ್ಯಾಸಕ್ಕೆ ಪೌಡರ್ ಮಾಡಿಕೊಳ್ಳಿ. ನೀವು ಮಿಕ್ಸಿಯನ್ನು ಬಳಸುತ್ತಿದ್ದರೆ, ಪೇಸ್ಟ್ ಆಗುವುದನ್ನು ತಪ್ಪಿಸಲು ಪಲ್ಸ್ ಮಾಡಿ ರುಬ್ಬಿಕೊಳ್ಳಿ.
- ಅಂತಿಮವಾಗಿ, ಮ್ಯಾಗಿಯಿಂದ ತಯಾರಿಸಲಾದ ಮ್ಯಾಗಿ ಕ್ರಂಬ್ಸ್ ಸಿದ್ಧವಾಗಿದೆ. ಗಾಳಿಯಾಡದ ಡಬ್ಬದಲ್ಲಿ ಇದನ್ನು ಒಂದು ತಿಂಗಳವರೆಗೆ ಸಂಗ್ರಹಿಸಬಹುದು.