ಕರಿ ಲೀವ್ಸ್ ರೈಸ್ ರೆಸಿಪಿ | curry leaves rice in kannada | ಕರಿಬೇವು ಚಿತ್ರಾನ್ನ

Browse more:

Ingredients

  • 2 ಟೀಸ್ಪೂನ್ ಎಣ್ಣೆ
  • 1 ಟೇಬಲ್ಸ್ಪೂನ್ ಉದ್ದಿನ ಬೇಳೆ
  • 1 ಟೇಬಲ್ಸ್ಪೂನ್ ಕಡ್ಲೆ ಬೇಳೆ
  • ½ ಟೇಬಲ್ಸ್ಪೂನ್ ಕೊತ್ತಂಬರಿ ಬೀಜಗಳು
  • ½ ಟೀಸ್ಪೂನ್ ಜೀರಾ / ಜೀರಿಗೆ
  • 3 ಒಣಗಿದ ಕೆಂಪು ಮೆಣಸಿನಕಾಯಿ
  • 2 ಟೇಬಲ್ಸ್ಪೂನ್ ಒಣ ತೆಂಗಿನಕಾಯಿ, ಹೋಳು
  • ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು
  • ½ ಕಪ್ ಕರಿಬೇವಿನ ಎಲೆಗಳು
  • 3 ಟೀಸ್ಪೂನ್ ಎಣ್ಣೆ
  • 1 ಟೀಸ್ಪೂನ್ ಸಾಸಿವೆ
  • 1 ಒಣಗಿದ ಕೆಂಪು ಮೆಣಸಿನಕಾಯಿ, ತುಂಡರಿಸಿದ
  • ಪಿಂಚ್ ಹಿಂಗ್
  • ಕೆಲವು ಕರಿಬೇವಿನ ಎಲೆಗಳು
  • 2 ಟೇಬಲ್ಸ್ಪೂನ್ ಕಡಲೆಕಾಯಿ
  • 2 ಕಪ್ ಬೇಯಿಸಿದ ಅಕ್ಕಿ
  • 1 ಟೀಸ್ಪೂನ್ ಉಪ್ಪು

Steps

  1. ಮೊದಲನೆಯದಾಗಿ, ಮಸಾಲ ಪುಡಿಯನ್ನು ತಯಾರಿಸಿಲು, 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, 1 ಟೀಸ್ಪೂನ್ ಉದ್ದಿನ ಬೇಳೆ, 1 ಟೀಸ್ಪೂನ್ ಕಡ್ಲೆ ಬೇಳೆ ಸೇರಿಸಿ.
  2. ಹಾಗೆಯೇ, ½ ಟೀಸ್ಪೂನ್ ಕೊತ್ತಂಬರಿ ಬೀಜಗಳು ಮತ್ತು ½ ಟೀಸ್ಪೂನ್ ಜೀರಾ / ಜೀರಿಗೆ ಸೇರಿಸಿ. ಬೇಳೆ ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿ.
  3. ಮತ್ತಷ್ಟು 3 ಒಣಗಿದ ಕೆಂಪು ಮೆಣಸಿನಕಾಯಿ, 2 ಟೀಸ್ಪೂನ್ ಒಣ ತೆಂಗಿನಕಾಯಿ, ಸಣ್ಣ ಚೆಂಡು ಗಾತ್ರದ ಹುಣಸೆಹಣ್ಣು ಸೇರಿಸಿ, ಕಡಿಮೆ ಉರಿಯಲ್ಲಿ ಹುರಿಯುವುದನ್ನು ಮುಂದುವರಿಸಿ.
  4. ಈಗ ½ ಕಪ್ ಕರಿಬೇವಿನ ಎಲೆಗಳನ್ನು ಸೇರಿಸಿ, ಕಡಿಮೆ ಉರಿಯಲ್ಲಿ ಹುರಿಯಿರಿ.
  5. ಕರಿಬೇವಿನ ಎಲೆಗಳು ಗರಿಗರಿಯಾಗುವವರೆಗೆ ಹುರಿಯಿರಿ.
  6. ಮಸಾಲೆಗಳನ್ನು ಸಂಪೂರ್ಣವಾಗಿ ತಣ್ಣಗಾಗಿಸಿ, ಸಣ್ಣ ಬ್ಲೆಂಡರ್ಗೆ ವರ್ಗಾಯಿಸಿ.
  7. ಯಾವುದೇ ನೀರನ್ನು ಸೇರಿಸದೆ ನಯವಾದ ಪುಡಿಗೆ ರುಬ್ಬಿಕೊಳ್ಳಿ. ಕರಿಬೇವಿನ ಮಸಾಲೆ ಪುಡಿ ಸಿದ್ಧವಾಗಿದೆ.
  8. ಈಗ ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ 1 ಟೀಸ್ಪೂನ್ ಸಾಸಿವೆ, 1 ಒಣಗಿದ ಕೆಂಪು ಮೆಣಸಿನಕಾಯಿ, ಪಿಂಚ್ ಹಿಂಗ್ ಮತ್ತು ಕೆಲವು ಕರಿಬೇವಿನ ಎಲೆಗಳನ್ನು ಸೇರಿಸಿ.
  9. ಹಾಗೆಯೇ, 2 ಟೀಸ್ಪೂನ್ ಕಡಲೆಕಾಯಿ ಸೇರಿಸಿ ಒಗ್ಗರಣೆ ನೀಡಿ.
  10. ಈಗ, 2 ಕಪ್ ಬೇಯಿಸಿದ ಅನ್ನ ಸೇರಿಸಿ. ಉಳಿದ ಅನ್ನ ಬಳಸುವುದನ್ನು ಖಚಿತಪಡಿಸಿಕೊಳ್ಳಿ ಅಥವಾ ಅನ್ನವನ್ನು ಸಂಪೂರ್ಣವಾಗಿ ತಣ್ಣಗಾಗಿಸಿ.
  11. ತಯಾರಾದ ಮಸಾಲೆ ಪುಡಿ ಜೊತೆಗೆ 1 ಟೀಸ್ಪೂನ್ ಉಪ್ಪು ಸೇರಿಸಿ.
  12. ಒಳ್ಳೆಯ ಮಿಶ್ರಣ ನೀಡಿ ಮಸಾಲೆ ಪುಡಿಯು ಚೆನ್ನಾಗಿ ಸಂಯೋಜಿಸಲಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
  13. ನಂತರ, 2 ಟೀಸ್ಪೂನ್ ನೀರು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
  14. ಮುಚ್ಚಿ, 3 ನಿಮಿಷಗಳ ಕಾಲ ಅಥವಾ ಫೇವರ್ ಗಳು ಸಂಪೂರ್ಣವಾಗಿ ಹೀರಲ್ಪಡುವವರೆಗೆ ಸಿಮ್ಮೆರ್ ನಲ್ಲಿಡಿ.
  15. ಅಂತಿಮವಾಗಿ, ರಾಯಿತದೊಂದಿಗೆ ಕರಿ ಲೀವ್ಸ್ ರೈಸ್ ಪಾಕವಿಧಾನವನ್ನು ಆನಂದಿಸಿ.