Skip to content
ಕ್ಯಾರೆಟ್ ಜಿಂಜರ್ ಸೂಪ್ ರೆಸಿಪಿ | carrot ginger soup in kannada
Ingredients
- 2 ಟೇಬಲ್ಸ್ಪೂನ್ ಆಲಿವ್ ಎಣ್ಣೆ
- 2 ಇಂಚಿನ ಶುಂಠಿ, ಸಣ್ಣಗೆ ಕತ್ತರಿಸಿದ
- ½ ಈರುಳ್ಳಿ, ಹೋಳು ಮಾಡಿದ
- 3 ಕ್ಯಾರೆಟ್, ಕತ್ತರಿಸಿದ
- 2½ ಕಪ್ ನೀರು
- ½ ಟೀಸ್ಪೂನ್ ಉಪ್ಪು
- ½ ಟೀಸ್ಪೂನ್ ಮಿಕ್ಸೆಡ್ ಹರ್ಬ್
- ½ ಟೀಸ್ಪೂನ್ ಪೆಪರ್ ಪೌಡರ್
- ¼ ಟೀಸ್ಪೂನ್ ಉಪ್ಪು
- 2 ಟೇಬಲ್ಸ್ಪೂನ್ ಕುಂಬಳಕಾಯಿ ಬೀಜಗಳು, ಅಲಂಕರಿಸಲು
- 1 ಟೀಸ್ಪೂನ್ ಪುದೀನ, ಅಲಂಕರಿಸಲು
Steps
- ಮೊದಲನೆಯದಾಗಿ, ಪ್ರೆಶರ್ ಕುಕ್ಕರ್‌ನಲ್ಲಿ 2 ಟೇಬಲ್ಸ್ಪೂನ್ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ 2 ಇಂಚಿನ ಶುಂಠಿಯನ್ನು ಹಾಕಿ.
- ಈಗ ½ ಈರುಳ್ಳಿ ಸೇರಿಸಿ ಮತ್ತು ಈರುಳ್ಳಿ ಮೃದುವಾಗುವವರೆಗೆ ಸಾಟ್ ಮಾಡಿ.
- 3 ಕ್ಯಾರೆಟ್ ಸೇರಿಸಿ ಮತ್ತು 2 ನಿಮಿಷ ಬೇಯಿಸಿ.
- ಕ್ಯಾರೆಟ್ ಪರಿಮಳ ಬರುವವರೆಗೆ ಚೆನ್ನಾಗಿ ಸಾಟ್ ಮಾಡಿ.
- 2½ ಕಪ್ ನೀರು ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ.
- ಪ್ರೆಶರ್ ಕುಕ್ಕರ್ ಮುಚ್ಚಿ, 3 ಸೀಟಿಗಳಿಗೆ ಬೇಯಿಸಿ.
- ನೀರು ಹರಿಸಿ ಸಂಪೂರ್ಣವಾಗಿ ತಣ್ಣಗಾಗಿಸಿ.
- ಬೇಯಿಸಿದ ಕ್ಯಾರೆಟ್ ಅನ್ನು ಬ್ಲೆಂಡರ್ಗೆ ವರ್ಗಾಯಿಸಿ ಮತ್ತು ಪ್ಯೂರಿ ತಯಾರಿಸಲು ನಯವಾದ ಪೇಸ್ಟ್ ಗೆ ರುಬ್ಬಿಕೊಳ್ಳಿ.
- ಈಗ ಕ್ಯಾರೆಟ್ ಪ್ಯೂರೀಯನ್ನು ದೊಡ್ಡ ಕಡಾಯಿಗೆ ವರ್ಗಾಯಿಸಿ.
- ಕ್ಯಾರೆಟ್ ಬೇಯಿಸಲು ಬಳಸಿದ ಉಳಿದ ನೀರಿನ್ನು ಸೇರಿಸಿ.
- ಅಗತ್ಯವಿರುವಂತೆ ಸ್ಥಿರತೆಯನ್ನು ಹೊಂದಿಸಿ, ಮಿಶ್ರಣ ಮಾಡಿ ಕುದಿಸಿ.
- ನಂತರ, ½ ಟೀಸ್ಪೂನ್ ಮಿಕ್ಸೆಡ್ ಹರ್ಬ್ಸ್, ½ ಟೀಸ್ಪೂನ್ ಪೆಪ್ಪರ್ ಪೌಡರ್ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
- ಅಂತಿಮವಾಗಿ, ಕ್ಯಾರೆಟ್ ಶುಂಠಿ ಸೂಪ್ ಅನ್ನು 2 ಟೇಬಲ್ಸ್ಪೂನ್ ಕುಂಬಳಕಾಯಿ ಬೀಜಗಳು ಮತ್ತು 1 ಟೀಸ್ಪೂನ್ ಪುದೀನಾದೊಂದಿಗೆ ಅಲಂಕರಿಸಿ.