Skip to content
ಆಲೂ ಸ್ಯಾಂಡ್ವಿಚ್ ರೆಸಿಪಿ | aloo sandwich in kannada
Ingredients
- 2 ಆಲೂಗಡ್ಡೆ / ಆಲೂ (ಬೇಯಿಸಿದ ಮತ್ತು ಹಿಸುಕಿದ)
- 2 ಟೇಬಲ್ಸ್ಪೂನ್ ಈರುಳ್ಳಿ (ಸಣ್ಣಗೆ ಕತ್ತರಿಸಿದ)
- 2 ಟೇಬಲ್ಸ್ಪೂನ್ ಪ್ಸಿಕಂ (ಸಣ್ಣಗೆ ಕತ್ತರಿಸಿದ)
- 1 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪು(ಸಣ್ಣಗೆ ಕತ್ತರಿಸಿದ)
- ½ ಟೀಸ್ಪೂನ್ ಮೆಣಸಿನ ಪುಡಿ
- 1 ಟೀಸ್ಪೂನ್ ಚಾಟ್ ಮಸಾಲಾ
- ¼ ಟೀಸ್ಪೂನ್ ಉಪ್ಪು
- 8 ಸ್ಲೈಸ್ ಬ್ರೆಡ್ (ಬಿಳಿ / ಕಂದು)
- 4 ಟೇಬಲ್ಸ್ಪೂನ್ ಟೊಮೆಟೊ ಸಾಸ್
- 4 ಟೇಬಲ್ಸ್ಪೂನ್ ಹಸಿರು ಚಟ್ನಿ
- 1 ಟೊಮೆಟೊ (ಸ್ಲೈಸ್ ಮಾಡಿದ)
- 1 ಟೀಸ್ಪೂನ್ ಪೆಪ್ಪರ್ (ಪುಡಿಮಾಡಿದ)
- 1 ಬ್ಲಾಕ್ ಚೆಡ್ಡಾರ್ ಚೀಸ್ (ತುರಿದ)
- ರೋಸ್ಟಿಂಗ್ಗಾಗಿ ಬೆಣ್ಣೆ
Steps
- ಮೊದಲಿಗೆ, ದೊಡ್ಡ ಮಿಶ್ರಣ ಬಟ್ಟಲಿನಲ್ಲಿ 2 ಬೇಯಿಸಿದ ಮತ್ತು ಹಿಸುಕಿದ ಆಲೂಗೆಡ್ಡೆ, 2 ಟೇಬಲ್ಸ್ಪೂನ್ ಈರುಳ್ಳಿ, 2 ಟೇಬಲ್ಸ್ಪೂನ್ ಕ್ಯಾಪ್ಸಿಕಮ್ ಮತ್ತು 1 ಟೇಬಲ್ಸ್ಪೂನ್ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಳ್ಳಿ.
- ½ ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂಟ್ ಚಾಟ್ ಮಸಾಲಾ ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ.
- ಎಲ್ಲಾ ಪದಾರ್ಥಗಳು ಚೆನ್ನಾಗಿ ಮಿಶ್ರಣವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ.
- ಈಗ ಬ್ರೆಡ್ನ 2 ಸ್ಲೈಸ್ ಗಳು ಮತ್ತು 1 ಟೇಬಲ್ಸ್ಪೂನ್ ಟೊಮೆಟೊ ಸಾಸ್ ಮತ್ತು 1 ಟೇಬಲ್ಸ್ಪೂನ್ ಗ್ರೀನ್ ಚಟ್ನಿ ಬ್ರೆಡ್ನ ಪ್ರತಿ ಸ್ಲೈಸ್ನಲ್ಲಿ ಹರಡಿ.
- ಬ್ರೆಡ್ ಸ್ಲೈಸ್ ಮೇಲೆ ತಯಾರಾದ ಆಲೂ ಮಸಾಲಾದ ಒಂದು ಟೇಬಲ್ಸ್ಪೂನ್ ಹರಡಿ.
- ಅಲ್ಲದೆ, ಆಲೂ ಮಸಾಲಾ ಮೇಲೆ ಟೊಮೇಟೊ ಸ್ಲೈಸ್ ಗಳನ್ನು ಇರಿಸಿ.
- ನಂತರ ಪುಡಿಮಾಡಿದ ಪೆಪ್ಪರ್ ಸಿಂಪಡಿಸಿ.
- ಮತ್ತಷ್ಟು ಚೆಡ್ಡರ್ ಚೀಸ್ ಅನ್ನು ಉದಾರವಾಗಿ ತುರಿಯಿರಿ.
- ಬ್ರೆಡ್ನ ಮತ್ತೊಂದು ಸ್ಲೈಸ್ನೊಂದಿಗೆ ಕವರ್ ಮಾಡಿ ನಿಧಾನವಾಗಿ ಒತ್ತಿರಿ.
- ಎರಡೂ ಬದಿಗಳಲ್ಲಿ ಬೆಣ್ಣೆಯನ್ನು ಹರಡಿ ಸ್ಯಾಂಡ್ವಿಚ್ ರೋಸ್ಟ್ ಮಾಡಿ.
- ಅಂತಿಮವಾಗಿ, ಅರ್ಧದಷ್ಟು ಬ್ರೆಡ್ ಕತ್ತರಿಸಿ ಮಸಾಲೆಯುಕ್ತ ಆಲೂ ಸ್ಯಾಂಡ್ವಿಚ್ ಅನ್ನು ಸೇವಿಸಿ.